ಮೆಟ್ರೋ ನಿಲ್ದಾಣಗಳು

;

ಟಿಕೇಟ್ ಮಾರಾಟ ಯಂತ್ರ

about img

ಟಿಕೇಟ್ ಮಾರಾಟ ಯಂತ್ರ

ಪ್ರಯಾಣಿಕರಿಗೆ ನಗದಿನ ಮೂಲಕ ತಮ್ಮ ಸ್ಮಾರ್ಟ್‍ಕಾರ್ಡುಗಳಿಗೆ ಮೌಲ್ಯವನ್ನು ತುಂಬಲು ಸಾಧ್ಯವಾಗುವಂತೆ ಬೈಯಪ್ಪನಹಳ್ಳಿ, ಎಂ.ಜಿ. ರಸ್ತೆ, ಇಂದಿರಾ ನಗರ ಮತ್ತು ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ** ಇನ್ನೂ ಶೀಘ್ರದಲ್ಲೇ ಕಾರ್ಯಗತಗೊಳ್ಳುವುದು **

about img

ಗ್ರಾಹಕ ಸೇವಾ ಕೇಂದ್ರ/ಕೌಂಟರುಗಳು

ಪ್ರಯಾಣಿಕರು ತಮ್ಮ ಟಿಕೇಟುಗಳ ಬಗೆಗಿನ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯ ಪಡೆಯಲು ನಿಲ್ದಾಣಗಳಲ್ಲಿ ಗ್ರಾಹಕ ಸೇವಾ ಕೆಂದ್ರ/ಕೌಂಟರುಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಆಗಮನ ಮತ್ತು ನಿರ್ಗಮನ ದ್ವಾರಗಳ ನಡುವೆ ಸ್ಥಾಪಿಸಲಾಗಿದ್ದು, ಸಂದಾಯಿತ ಮತ್ತು ಸಂದಾಯರಹಿತ ಪ್ರದೇಶಗಳೆರಡರಿಂದಲೂ ಪ್ರವೇಶಿಸಬಹುದಾಗಿದೆ. ಹೆಚ್ಚಿನ ದರಗಳನ್ನು ಸಂದಾಯ ಮಾಡುವ ಅಗತ್ಯವಿರುವಂಥವರು ಅಥವಾ ಸರಿಯಾಗಿ ಕೆಲಸ ಮಾಡದಿರುವ ಟಿಕೇಟುಗಳಿಗೆ ಸಂಬಂಧಿಸಿದಂತೆ ಸಹಾಯ ಪಡೆಯಬಯಸುವವರು ಸಹ ನಿಲ್ದಾಣಗಳಲ್ಲಿನ ಗ್ರಾಹಕ ಸೇವಾ ಕೌಂಟರು/ಕೇಂದ್ರಗಳಿಗೆ ಭೇಟಿ ನೀಡಬಹುದು.

about img

ಪ್ರಯಾಣಿಕರ ಮಾಹಿತಿ ಪ್ರದರ್ಶನ ಫಲಕಗಳು

ಪ್ರಯಾಣಿಕರ ಮಾಹಿತಿ ಪ್ರದರ್ಶನ ಫಲಕಗಳನ್ನು, ಸ್ವಯಂಚಾಲಿತ ದ್ವಾರಗಳು ಮತ್ತು ಪ್ಲಾಟ್‍ಫಾರ್ಮ್ ಬಳಿ ರೈಲುಗಳ ಆಗಮನದ ಬಗ್ಗೆ ಪ್ರಯಾಣಿಕರಿಗೆ ವಾಸ್ತವವಾದ ಸಮಯದ ಮಾಹಿತಿ ಒದಗಿಸಲು ಅಳವಡಿಸಲಾಗಿದೆ.

ಮೆಟ್ರೋ ಶಿಷ್ಟಾಚಾರಗಳು

ಎಎಫ್‍ಸಿ ದ್ವಾರಗಳು

about img
 • ಮೊದಲು ಹಿರಿಯರು ಮತ್ತು ಮಕ್ಕಳಿಗೆ ಹೋಗಲು ಅವಕಾಶ ಮಾಡಿಕೊಡಿ. 
 • ದ್ವಾರದ ಮೂಲಕ ಹಾದುಹೋಗುವಾಗ ನಿಮ್ಮ ವಸ್ತುಗಳು ಮತ್ತು ಬಟ್ಟೆಗಳನ್ನು ದ್ವಾರಗಳಿಗೆ ತಾಗದಂತೆ ಹಿಡಿದುಕೊಳ್ಳಿ.
 • ದ್ವಾರದ ಮೂಲಕ ಹಾದು ಹೋಗುವಾಗ ನಿಮ್ಮ ಮಕ್ಕಳ ಬಗ್ಗೆ ಜಾಗರೂಕತೆ ವಹಿಸಿ. 3 ಅಡಿ ಎತ್ತರಕ್ಕಿಂತ ಕಡಿಮೆ ಎತ್ತರವಿರುವ ಮಕ್ಕಳನ್ನು ನಿಮ್ಮ ಮುಂದೆ ನಿಮಗೆ ಹತ್ತಿರ ಇರಿಸಿಕೊಳ್ಳಿ.
 •  ಸ್ಮಾರ್ಟ್‍ಕಾರ್ಡ್ ಹೊಂದಿರುವವರು ನಿರ್ಗಮನ ದ್ವಾರಗಳಲ್ಲಿ ಯುಕ್ತ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಸುನಿಶ್ಚಿತಪಡಿಸಿಕೊಳ್ಳಬೇಕು.
about img
 • ಗುಂಪಿನಲ್ಲಿರುವಾಗ ಬಲವಂತವಾಗಿ ದ್ವಾರಗಳನ್ನು ಪ್ರವೇಶಿಸಲು/ನಿರ್ಗಮಿಸಲು ಯತ್ನಿಸುವುದು. 
 • ದ್ವಾರದ ಮೂಲಕ ಹಾದುಹೋದ ನಂತರ ಹಠಾತ್ತನೆ ನಿಂತು ಹಿಂತಿರುಗುವುದು.
 •  ದ್ವಾರದ ಮೂಲಕ ಹಾದು ಹೋಗುವಾಗ ನಿಲ್ಲುವುದು.
 •  ಪ್ರವೇಶ/ನಿರ್ಗಮನಕ್ಕಾಗಿ ಎಎಫ್‍ಸಿ ದ್ವಾರಗಳ ಮೇಲಿನಿಂದ ಜಿಗಿಯಲು ಯತ್ನಿಸುವುದು.

ಪ್ಲಾಟ್‍ಫಾರ್ಮ್

about img
 •  ರೈಲಿಗಾಗಿ ಕಾಯುತ್ತಿರುವಾಗ ಸರದಿ ಸಾಲಿನಲ್ಲಿ ನಿಲ್ಲಿ.
 •  ಮೊದಲು ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಹೊರಬರಲು ಅವಕಾಶ ಮಾಡಿಕೊಡಿ.
 •  ರೈಲು ಮತ್ತು ಪ್ಲಾಟ್‍ಫಾರ್ಮ್ ತುದಿಯ ನಡುವಿನ ಅಂತರ ದಾಟಿ ನೀವು ಹೆಜ್ಜೆ ಇರಿಸುತ್ತಿರುವಾಗ ನಿಮ್ಮ ಕಾಲುಗಳೆಡೆ ಗಮನವಿರಲಿ.
 •  ಬಾಗಿಲುಗಳು ಮುಚ್ಚಿಕೊಳ್ಳಲು ಪ್ರಾರಂಭಿಸಿದಲ್ಲಿ ಮುಂದಿನ ರೈಲಿಗಾಗಿ ಕಾಯಿರಿ.
 •  ಪ್ಲಾಟ್‍ಫಾರ್ಮ್ ತುದಿಯ ಬಳಿ ಹಳದಿ ಗೆರೆಯಿಂದ ಹಿಂದೆ ನಿಲ್ಲಿ.
 •  ನಿಮ್ಮ ವಸ್ತುಗಳು ಹಳಿಯ ಮೇಲೆ ಬಿದ್ದರೆ, ನಮ್ಮ ಮೆಟ್ರೋ ಸಿಬ್ಬಂದಿಯನ್ನು ಸಂಪರ್ಕಿಸಿ.
 •  ಯಾವುವೇ ಉಪೇಕ್ಷಿತ ವಸ್ತುಗಳು ಕಂಡುಬಂದಲ್ಲಿ ನಿಲ್ದಾಣ ಸಿಬ್ಬಂದಿಗೆ/ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿಗೆ ತಿಳಿಸುವುದು. .
about img
 • ಹಳಿಯ ಮೇಲೆ ಬಿದ್ದಂಥ ವಸ್ತುಗಳನ್ನು ಸ್ವತಃ ನೀವೇ ಎತ್ತಿಕೊಳ್ಳಲು ಪ್ರಯತ್ನಿಸುವುದು. 
 • ಪ್ಲಾಟ್‍ಫಾರ್ಮ್ ತುದಿಯಲ್ಲಿ ವಾಲುವುದು.
 •  ಕುತೂಹಲದಿಂದ ಚಲಿಸುತ್ತಿರುವ ರೈಲಿನ ಬಳಿ ಬರುವುದು.
 •  ಪ್ಲಾಟ್‍ಫಾರ್ಮ್ ಪ್ರದೇಶಗಳಾಚೆ ನುಗ್ಗುವುದು.
 •  ಹಳಿಯ ಮೇಲೆ ಬಿದ್ದಂಥ ವಸ್ತುಗಳನ್ನು ಸ್ವತಃ ನೀವೇ ಎತ್ತಿಕೊಳ್ಳಲು ಪ್ರಯತ್ನಿಸುವುದು.
 •  ಬಾಗಿಲುಗಳು ಮುಚ್ಚಿಕೊಳ್ಳುತ್ತಿರುವಾಗ ರೈಲನ್ನು ಹತ್ತಲು ಪ್ರಯತ್ನಿಸುವುದು.
 •  ರೈಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಿರುವಾಗ ಅವುಗಳನ್ನು ತಡೆಯುವುದು.

ರೈಲಿನ ಒಳಗೆ

about img
 •   ರೈಲಿನ ಬಾಗಿಲುಗಳಿಂದ ದೂರ ನಿಲ್ಲುವುದು ಮಾಡಬೇಕಾದವುಗಳು
 •   ದಯವಿಟ್ಟು ನಿಮ್ಮ ಆಸನಗಳನ್ನು ಮಕ್ಕಳು, ಗರ್ಭಿಣಿಯರು ಮತ್ತು ಹಿರಿಯ ಪ್ರಯಾಣಿಕರಿಗೆ ಬಿಟ್ಟುಕೊಡಿ
 •   ಯಾವಾಗಲೂ ನಿಂತುಕೊಂಡಿರುವಾಗ ಕೈಕಂಬಿಗಳು ಅಥವಾ ಸ್ಟ್ರಾಪ್ ಹ್ಯಾಂಗರ್‍ಗಳನ್ನು ಹಿಡಿದುಕೊಂಡು ನಿಲ್ಲಿ
 •   ಯಾವಾಗಲೂ ವ್ಹೀಲ್‍ಚೇರ್ ಪ್ರಯಾಣಿಕರಿಗಾಗಿ ಸುರಕ್ಷಾ ಪಟ್ಟಿಗಳನ್ನು ಬಳಸಿ
 •   ಯಾವಾಗಲೂ ನಿಮ್ಮ ವಸ್ತುಗಳ ಬಳಿ ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ
about img
 • ರೈಲು ಬಾಗಿಲುಗಳ ಮೇಲೆ ಒರಗಿ ನಿಲ್ಲುವುದು ಮಾಡಬಾರದವುಗಳು
 • ರೈಲು ಬಾಗಿಲುಗಳ ಮೇಲೆ ಅಥವಾ ಬಾಗಿಲ ತುದಿಗಳ ಮೇಲೆ ನಿಮ್ಮ ಕೈಯನ್ನಿರಿಸುವುದು
 • ಅಂಗವಿಕಲರಿಗೆ ವಿಶೇಷವಾಗಿ ಮೀಸಲಿರಿಸಿದ ಆಸನಗಳಲ್ಲಿ ದಯವಿಟ್ಟು ಕುಳಿತುಕೊಳ್ಳಬೇಡಿ.
 • ತುರ್ತು ಪರಿಸ್ಥಿತಿಯ ಹೊರತು ರೈಲಿನಲ್ಲಿನ ಯಾವುದೇ ಗುಂಡಿಯನ್ನು ಎಳೆಯುವುದು ಅಥವಾ ಒತ್ತುವುದು
 • ರೈಲಿನಲ್ಲಿನ ಯಾವುದೇ ಸಂಕೇತಗಳ ಮೇಲೆ ಗೀರು ಹಾಕುವುದು ಅಥವಾ ಅಳಿಸಿಹಾಕುವುದು
 • ರೈಲಿನ ನೆಲದ ಹಾಸಿನ ಮೇಲೆ ಚಕ್ಕಳಬಕ್ಕಳ ಹಾಕಿ ಕುಳಿತುಕೊಳ್ಳುವುದು
 • ರೈಲಿನಲ್ಲಿ ಕುಡಿಯುವುದು ಅಥವಾ ತಿನ್ನುವುದು
 • ರೈಲು ಅಥವಾ ನಿಲ್ದಾಣಗಳಲ್ಲಿ ಧೂಮಪಾನ ಮಾಡುವುದು

ತಿರುಗು ಮೆಟ್ಟಿಲುಗಳು (ಎಸ್ಕಲೇಟರ್ಸ್)

about img
 • ಯಾವಾಗಲೂ ಹಿಡಿಗಂಬಿಯನ್ನು ಹಿಡಿದುಕೊಳ್ಳಿ
 • ಚಲಿಸುತ್ತಿರುವ ದಿಕ್ಕಿನ ಕಡೆಗೆ ಮುಖ ಮಾಡಿ
 • ಮಕ್ಕಳು, ಹಿರಿಯರು ಮತ್ತು ಅಂಗವಿಕಲರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು
 • ತಿರುಗು ಮೆಟ್ಟಿಲುಗಳು (ಎಸ್ಕಲೇಟರುಗಳು) ನಿಂತುಹೋದರೆ ದಯವಿಟ್ಟು ಮೆಟ್ಟಿಲುಗಳನ್ನು ಬಳಸಿ
 • ಯಾವಾಗಲೂ ಹಿಡಿಗಂಬಿಯನ್ನು ಹಿಡಿದುಕೊಳ್ಳಿ
 • ತಿರುಗು ಮೆಟ್ಟಿಲು (ಎಸ್ಕಲೇಟರ್) ಕಾರ್ಯನಿರ್ವಹಿಸದಿದ್ದರೆ ದಯವಿಟ್ಟು ಗ್ರಾಹಕ ಸೇವಾ ಕೇಂದ್ರಕ್ಕೆ ಮಾಹಿತಿ ನೀಡಿ
 • ದಯವಿಟ್ಟು ಬೇರೆಯವರಿಗೆ ವೇಗವಾಗಿ ನಡೆಯಲು ಅವಕಾಶವಾಗುವಂತೆ ಮಾಡಿಕೊಡಲು ಎಡಭಾಗದಲ್ಲೇ ನಿಲ್ಲಿ
about img
 • ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲೆ ಓಡುವುದು
 • ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲೆ ಕುಳಿತುಕೊಳ್ಳುವುದು ಅಥವಾ ಆಟವಾಡುವುದು
 • ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ತುದಿಯ ಮೇಲೆ ಒರಗುವುದು
 • ತಿರುಗು ಮೆಟ್ಟಿಲುಗಳನ್ನು (ಎಸ್ಕಲೇಟರ್‍ಗಳನ್ನು) ಒಂಟಿಯಾಗಿ ಬಳಸಲು ಮಕ್ಕಳಿಗೆ ಅವಕಾಶ ಮಾಡಿಕೊಡುವುದು
 • ತಿರುಗು ಮೆಟ್ಟಿಲುಗಳಿಂದ (ಎಸ್ಕಲೇಟರ್‍ಗಳಿಂದ) ಇಳಿಯುವ ಪ್ರದೇಶದಲ್ಲಿ ನಿಲ್ಲುವುದು ಅಥವಾ ಕಾಯುವುದು
 • ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲಿನಿಂದ ಕೈಬಂಡಿ (ಪ್ರಾಮ್) ಅಥವಾ ಸಾಮಾನುಸರಂಜಾಮನ್ನು ತೆಗೆದುಕೊಳ್ಳುವುದು.

ಸುರಕ್ಷಿತ ಮುನ್ನೆಚ್ಚರಿಕೆಗಳ

ನಿಲ್ದಾಣಗಳಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ:

 • ಬೆಂಕಿ ಕಾಣಿಸಿಕೊಂಡರೆ, ಬೆಂಕಿ ಎಚ್ಚರಿಕೆ ಸಂಕೇತಗಳನ್ನು ನೀಡುವುದಕ್ಕಾಗಿ ಮ್ಯಾನ್ಯುವಲ್ ಕರೆ ಕೇಂದ್ರಗಳಿವೆ.
 • ನಿಲ್ದಾಣವನ್ನು ಖಾಲಿ ಮಾಡುವಂತೆ ನಮ್ಮ ಮೆಟ್ರೋ ಸಿಬ್ಬಂದಿಯು ನೀಡಿದ ಸೂಚನೆಗಳನ್ನು ಪಾಲಿಸಿ.
 • ರಸ್ತೆ ಹಂತದವರೆಗೆ ತಲುಪಲು ಹತ್ತಿರದ ತಿರುಗು ಮೆಟ್ಟಿಲು (ಎಸ್ಕಲೇಟರ್) ಅಥವಾ ಮೆಟ್ಟಿಲುಗಳನ್ನು ಬಳಸಿ.
 • ಕೂಡಲೇ ಹತ್ತಿರದ ನಿರ್ಗಮನ ದ್ವಾರದ ಮೂಲಕ ನಿಲ್ದಾಣ ತೊರೆಯಿರಿ.
 • ನಿರ್ಗಮನ ದ್ವಾರಗಳೆಡೆ ನಡೆಯುವಾಗ ಜಾಗ್ರತೆ ವಹಿಸಿ.
 • ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಲಿಫ್ಟ್‍ಗಳನ್ನು ಬಳಸಬೇಡಿ.

ರೈಲಿನಲ್ಲಿ ಘಟನೆಯ ವರದಿ:

 • ರೈಲು ಚಾಲಕನನ್ನು ಸಂಪರ್ಕಿಸಲು ರೈಲಿನ ಒಳಗಿನ ಪಿಇಎ ಗುಂಡಿಯನ್ನು ಒತ್ತಿ.
 • ರೈಲು ಚಾಲಕನು ನೀಡುವ ಸೂಚನೆಗಳನ್ನು ಪಾಲಿಸಿ.

ತುರ್ತು ಕರೆ ಪಾಯಿಂಟ್ (ಇಸಿಪಿ)

ಎಮರ್ಜೆನ್ಸಿ ಸ್ಟಾಪ್ ಪ್ಲುಂಗರ್ (ಇಎಸ್ಪಿ)

ತುರ್ತು ಪ್ರಯಾಣ ವ್ಯವಸ್ಥೆ (ಇಟಿಎಸ್)