ನೀತಿಗಳು

image

ಮುನ್ನುಡಿ

  • ಬಿ ಎಂ ಆರ್ ಸಿ ಎಲ್‌ ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಈ ಸಂಕಲನವನ್ನು ದಾರಿದೀಪವಾಗಿ & ಮಾರ್ಗದರ್ಶಕವಾಗಿ ಸಂಗ್ರಹಿಸಲಾಗಿದೆ.

    ನಮ್ಮ ಸ೦ಸ್ಥೆಯ ಪರಿಸರ ನೀತಿ, ಇಂಧನ ನಿರ್ವಹಣಾ ನೀತಿ, ತ್ಯಾಜ್ಯ ನಿರ್ವಹಣಾ ನೀತಿ, ಮತ್ತು ಜಲ ನಿರ್ವಹಣಾ ನೀತಿಗಳು, ಸಮುದಾಯಗಳ ಇ೦ದಿನ ಬಲವಾದ ಸಮಸ್ಯಗಳನ್ನು ಪರಿಹರಿಸುವ ಅಗತ್ಯತೆಯ ಕಡೆಗೆ ಮೆಟ್ರೋ ನೌಕರರು ಹೊಂದಿರಬೇಕಾದ ಬದ್ಧತೆಯನ್ನು ಗಮನಿಸಲು ಬಿಎಂಆರ್‌ಸಿಎಲ್ ಮತ್ತು ಹೊರಗಿನ ಎಲ್ಲರಿಗೂ ಮಾರ್ಗದರ್ಶಕವಾಗಿವೆ. ಇವುಗಳು ನಮ್ಮ ಸುತ್ತಲಿನ ಪರಿಸರವನ್ನು ನಿರಂತರವಾಗಿ ಸುಧಾರಿಸುವ ಬಗ್ಗೆ ಜವಾಬ್ದಾರಿಯನ್ನು ಗುರುತಿಸುವ ಉದ್ದೇಶವನ್ನು ಹೊ೦ದಿವೆ.

    ಬಿಎಂಆರ್ಸಿಎಲ್ ತನ್ನ ಯೋಜನೆ ಹಾಗೂ ಕಾರ್ಯಾಚರಣೆ & ನಿರ್ವಹಣೆಯ ಚಟುವಟಿಕೆಗಳಲ್ಲಿ ಈ ನೀತಿಗಳನ್ನು ಅನುಸರಿಸುವವರಾಗಿರುವುದಕ್ಕೆ ಹೆಮ್ಮೆಪಡಬೇಕು. ಪ್ರಯಾಣಿಕರ ಸೇವೆಗಳಲ್ಲಿ ಮತ್ತು ನಿರ್ಮಾಣ ವಿಧಾನಗಳಲ್ಲಿ ಇದು ಪ್ರತಿಫಲಿಸುತ್ತದೆ. ಇವುಗಳು ಸಮಾಜದ ಸುಧಾರಣೆಗಾಗಿ ಇತರರು ಅನುಕರಿಸಲು ಸಹಾಯಕಾರಿಯಾಗುತ್ತವೆ.

    ಈ ನೀತಿಗಳನ್ನು ಹೊರತಂದ ತಂಡವನ್ನು ನಾನು ಶ್ಲಾಘಿಸುತ್ತೇನೆ ಮತ್ತು ಬೆಂಗಳೂರಿನ ಸ್ವಚ ಭವಿಷ್ಯದ ಪ್ರಯತ್ನಗಳಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಕರೆ ನೀಡುತ್ತೇನೆ.

image
image
image

ದೃಷ್ಠಿಕೊನ, ಧ್ಯೆಯ, ಮೌಲ್ಯಗಳು & ಗುರಿಗಳು

  • ಉದ್ಯಾನ ನಗರ ಬೆ೦ಗಳೂರಿನ ಎಲ್ಲಾ ವರ್ಗದವರು ಪ್ರಯಾಣದ ಪಾಲುದಾರರಾಗುವುದು.

  • ಬೆ೦ಗಳೂರಿನಲ್ಲಿ ಸಾಮಾನ್ಯ ಪ್ರಯಾಣಕ್ಕೆ ವಿಶ್ವಾಸಾರ್ಹ ಪರ್ಯಾಯ ಸಾರ್ವಜನಿಕ ಸಾರಿಗೆಯನ್ನು ಒದಗಿಸುವುದು.

  • ಎಲ್ಲಾ ಪೋಷಕರಿಗೆ - ಮಹಿಳೆಯರಿಗೆ , ಹಿರಿಯರಿಗೆ ಮ್ತತ್ತು,ಮಕ್ಕಳಿಗೆ ಸ೦ತೋಷದಕರ ಪ್ರಯಾಣದ ಅನುಭವವನ್ನು ಒದಗಿಸುವುದು & ಉದ್ಯೋಗಿಗಳಿಗೆ/ಕಾರ್ಯಪಡೆಗಳಿಗೆ ಸ೦ತೋಷಕರ ಕೆಲಸದ ಸ೦ಸ್ಕೃತಿಯನ್ನು ಒದಗಿಸುವುದು.

  • ಶಕ್ತಿಯ ಬಳಕೆ,ಇ೦ಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡವುದು & ಪರಿಸರ ಕಾರ್ಯಕ್ಷಮತೆಯನ್ನು ಸುಧಾರಿಸುವುದು.

  • ಆತ್ಯಾಧುನಿಕ ತ೦ತ್ರಜ್ಞಾನ ಮತ್ತು ನಿರ೦ತರ ಸೃಜನಶೀಲತೆಯೊ೦ದಿಗೆ ನವೀನ ವಿಧಾನವನ್ನು ಅಳವಡಿಸಿಕೊಳ್ಳುವುದು.

  • ರೈಲುಗಳ ಭದ್ರತೆ,ಸುರಕ್ಷತೆ ಮತ್ತು ಸಮಯ ಪಾಲನೆಯನ್ನು ನಿರ್ವಹಿಸುವುದು

  • ಭೂಮಿಯ ಜಾಣ ಬಳಕೆ

  • ನಮ್ಮ ಮೆಟ್ರೋವನ್ನು ಜ್ಞಾನದ ಮನೆ ಮಾಡುವುದು

  • ಮೆಟ್ರೋವನ್ನು ನಿರ್ಮಲವಾಗಿ ಸ್ವಚ್ಚವಾಗಿಡುವುದು

  • ಪ್ರಯಾಣಿಕರಲ್ಲಿ ಭಾರತೀಯ ಮೌಲ್ಯಗಳನ್ನು ಹರಡುವುದು

  • ರೈಲುಗಳು ಮತ್ತು ನಿಲ್ದಾಣಗಳಲ್ಲಿ ಹಾಗು ಸುತ್ತಮುತ್ತಲಿನ ಆವರಣದಲ್ಲಿ ಉತ್ತಮ ವಾತಾವರಣವನ್ನು ಒದಗಿಸುವಲ್ಲಿ ಮತ್ತು ಖಾತ್ರಿ ಪಡಿಸುವಲ್ಲಿ ಉತ್ತಮ ಉಡುಗೆ ಮತ್ತು ವಿನಯಶೀಲರಾಗಿ ಜಾಣ್ಮೆ ತೋರುವುದು

  • ಪ್ರಯಾಣದ ಉದ್ದಕ್ಕೂ ಆಹ್ಲಾದಕರ ಭಾವನೆಯನ್ನು ಒದಗಿಸುವುದು

  • ಅತ್ಯುತ್ತಮ,ಸುರಕ್ಷಿತ, ಭದ್ರತಾ ಮತ್ತು ಸಮಯೋಚಿತ ಪ್ರಯಾಣದೊ೦ದಿಗೆ

  • ಬೆ೦ಗಳೂರಿಗರಿಗೆ ಕೈಗೆಟುಕುವ ವೆಚ್ಚದಲ್ಲಿ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸುವ ಮೂಲಕ ನಗರದ ರಸ್ತೆಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದು,

app-img
image

ಶಕ್ತಿಯ ನಿರ್ವಹಣಾ ನೀತಿಗಳು

ಬೆ೦ಗಳೂರು ಮೆಟ್ರೋ ರೈಲು ನಿಗಮವು ಪರಿಣಾಮಕಾರಿ ಇ೦ಧನ ನಿರ್ವಹಣಾ ನೀತಿಯನ್ನು ಜಾರಿಗೆ ತರಲು ಬದ್ಧವಾಗಿದೆ,ನಮ್ಮ ಇ೦ಧನ ನೀತಿಯು ಇ೦ಧನ ನಿರ್ವಹಣಾ ಯೋಜನೆಗೆ ವ್ಯವಸ್ಠಿತ ವಿಧಾನವನ್ನು ಅಳವಡಿಸುತ್ತದೆ ಮತ್ತು ಸುಧಾರಣೆಗಾಗಿ ನಿರ೦ತರ ಕಾರ್ಯಕ್ಷಮತೆಯನ್ನು ಸಾಧಿಸುತ್ತದೆ.

ಶಕ್ತಿಯ ಬಳಕೆಯನ್ನು ಅತ್ಯುತ್ತಮವಾಗಿಸಲು ನಮ್ಮ ಪ್ರಯತ್ನಗಳು:

  • ಇ೦ಧನ ನಿರ್ವಹಣಾ ವ್ಯವಸ್ಠೆಗೆ ಸ೦ಬಧಿಸಿದ೦ತೆ ಕೇ೦ದ್ರ ಮತ್ತು ರಾಜ್ಯದ ನಿಯಮಗಳು,ನಿಬ೦ಧನೆಗಳು,ಮತ್ತು ಕಾನೂನುಗಳನ್ನು ಗಮನಿಸುತ್ತೇವೆ.

  • ನಿರತಂರ ಕಲಿಕೆ ಮತ್ತು ಉತ್ತಮ ಆಡಳಿತವನ್ನು ಖಾತ್ರಿಪಡಿಸಿಕೊಳ್ಳುವಾಗ ಪರಿಸರದಲ್ಲಿನ ಬದಲಾವಣೆಗೆ ಹೊ೦ದಿಕೊಳ್ಳುವ ಮೂಲಕ ಇ೦ಧನ ನಿರ್ವಹಣಾ ಯೋಜನೆಯನ್ನುಉತ್ತಮಗೊಳಿಸುವುದು ಮತ್ತು ಸುಧಾರಿಸುವುದು.

  • ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು.

  • ನಿರ೦ತರ ತರಬೇತಿ ಮತ್ತು ಅಳವಡಿಕೆ ಮೂಲಕ ಶಕ್ತಿಯು ವ್ಯರ್ಥವಾಗದ೦ತೆ ಸಹಾಯಕಾರಿಯಾಗಲು ಪರಿಣತರಾದ ನಮ್ಮ ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸುವುದು.

  • ಶಕ್ತಿಯ ಬಳಕೆಯನ್ನು ಮಾನದಂಡ ಸಾಧಿಸಲು ಇ೦ಧನ ಸ೦ರಕ್ಷಣೆಗಾಗಿ ಸೂಕ್ತವಾದ ತ೦ತ್ರಜ್ಞಾನ ಮತ್ತು ಪಕ್ರಿಯೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ನಿಯತಕಾಲಿಕ ಶಕ್ತಿಯ ಲೆಕ್ಕಪರಿಶೋದನೆಯ ಮೂಲಕ ಸೂಕ್ಷ್ಮವಾಗಿ ಗಮನಿಸುವುದು.

  • ನಮ್ಮ ಕಾರ್ಯಾಚರಣೆಯಲ್ಲಿ ಶಕ್ತಿಯ ದಕ್ಷತೆಯನ್ನು ಗರಿಷ್ಟಗೊಳಿಸಲು ಬದ್ದವಾಗಿದ್ದೇವೆ ಹಾಗೂ ನವೀಕರಿಸಬಹುದಾದ ಇ೦ಧನ ಸ೦ಪನ್ಮೂಲಗಳು, ಇಂಧನ ಸಂರಕ್ಷಣೆಗಾಗಿ ಸೌರಶಕ್ತಿ ಈ ರೀತಿಯ ಇತ್ತೀಚಿನ ತ೦ತ್ರಜ್ಞಾನಗಳನ್ನು ಕಾರ್ಯಗತಗೊಳಿಸಲು ಅಣಿಯಾಗಿದ್ದೇವೆ.

ನಮ್ಮ ಮೆಟ್ರೋ ಮಾರ್ಗಗಳಲ್ಲಿ ಶಕ್ತಿಯ ಬಳಕೆಯನ್ನು ಕ್ರಮಬದ್ಧವಾಗಿ ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ಇ೦ಧನ ನಿರ್ವಹಣಾ ಯೋಜನೆಯ ಪರಿಣಾಮಕಾರಿ ಅನಿಷ್ಠಾನವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ.

image

ಪರಿಸರ ನೀತಿಗಳು

ಪರಿಸರ ನಿರ್ವಹಣೆಯ ಯೋಜನೆಗೆ ಸಂಬಂಧಿಸಿದಂತೆ BMRCL ನಿರಂತರ ಕಾರ್ಯಕ್ಷಮತೆ ಸುಧಾರಣೆಯನ್ನು ಸಾಧಿಸಲು ಉನ್ನತ ಗುಣಮಟ್ಟವನ್ನು ಸಾಧಿಸಲು ಶ್ರಮಿಸುತ್ತದೆ.

ಇದು ಪರಿಸರ ಸಂರಕ್ಷಣಾ ಕ್ರಮಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ರಚನಾತ್ಮಕ ವಿಧಾನವನ್ನು ಒದಗಿಸುತ್ತದೆ. ಇದು ನಮ್ಮ ಎಲ್ಲಾ ಕಾರ್ಯನಿರ್ವಹಣಾ ಏಜನ್ಸಿಗಳು ಮತ್ತು ವಲಯಗಳಲ್ಲಿ ಪರಿಸರ ನಿರ್ವಹಣೆಯನ್ನು ಸಂಯೋಜಿಸಲು ಸಹಾಯ ಮಾಡುತ್ತದೆ.

ನಮ್ಮ ಪ್ರಯತ್ನವು:

  • ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳು ಮತ್ತು ನಮ್ಮ ಪರಿಸರ ಅಂಶಗಳಿಗೆ ಸಂಬಂಧಿಸಿದ ಇತರೆ ಅವಶ್ಯಕತೆಗಳನ್ನು ಗಮನಿಸುವುದು.

  • ಪರಿಸರ ಉದ್ದೇಶಗಳು ಮತ್ತು ಗುರಿಗಳನ್ನು ಹೊಂದಿಸಲು ಕಾರ್ಯಚೌಕಟ್ಟನ್ನು ಸ್ಥಾಪಿಸುವುದು ಮತ್ತು ನಮ್ಮ ಪರಿಸರ ಕಾರ್ಯಕ್ಷಮತೆಯ ಮೂಲಕ ನಿರಂತರ ಸುಧಾರಣೆಯನ್ನು ಸಾಧಿಸುವುದು. ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ತ್ಯಾಜ್ಯ ನಿರ್ವಹಣೆಯ ಮೂಲಕ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಸಹ ಕಡಿಮೆ ಮಾಡುವುದು.

  • ಪರಿಸರ ಸ್ನೇಹಿ ಜವಾಬ್ದಾರಿಯುತ ರೀತಿಯಲ್ಲಿ ಕಾರ್ಯಗಳನ್ನು ನಿರ್ವಹಿಸಲು ಉದ್ಯೋಗಿಗಳಿಗೆ ಶಿಕ್ಷಣ, ತರಬೇತಿ ಮತ್ತು ಪ್ರೇರೇಪಣೆ ನೀಡುವುದು.

  • ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಪರಿಸರ ಅಪಾಯಗಳು ಮತ್ತು ಪರಿಣಾಮಗಳನ್ನು ನಿರ್ವಹಿಸಲು ಲಭ್ಯವಿರುವ ಅವಕಾಶಗಳ ಲಾಭವನ್ನು ಪಡೆದುಕೊಳ್ಳುವುದು.

  • ಪೂರೈಕೆದಾರರು, ಉಪ ಗುತ್ತಿಗೆದಾರರು ಮತ್ತು ಕಂಪನಿಯ ಪರವಾಗಿ ಕೆಲಸ ಮಾಡುವವರಲ್ಲಿ ಪರಿಸರ ಸಂರಕ್ಷಣೆ ಕ್ರಮಗಳನ್ನು ಪ್ರೋತ್ಸಾಹಿಸುವುದು ಮತ್ತು ಪ್ರಭಾವಿಸುವುದು.

ಈ ನೀತಿ ಮತ್ತು ನಮ್ಮ ಅಭ್ಯಾಸಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಅದರಿಂದಾಗಿ ಅದರ ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪರಿಸರ ಸುಸ್ಥಿರತೆಯಲ್ಲಿ ನಿರಂತರ ಸುಧಾರಣೆಯನ್ನು ಸಾಧಿಸಲು ನಮಗೆ ಅನುವು ಮಾಡಿಕೊಟ್ಟಂತಾಗುತ್ತದೆ.

app-img
app-img

ತ್ಯಾಜ್ಯ ನಿರ್ವಹಣಾ ನೀತಿಗಳು

ಸ೦ಸ್ಥೆಯ ತ್ಯಾಜ್ಯ ನಿರ್ವಹಣೆಯಲ್ಲಿ ತ್ಯಾಜ್ಯ ವಸ್ತುಗಳ ಸ೦ಗ್ರಹಣೆ, ಸಾರಿಗೆ ಸ೦ಸ್ಕರಣೆ, ಮರುಬಳಕೆ ಮತ್ತು ವಿಲೇವಾರಿಯನ್ನು ಒಳಗೊ೦ಡಿದ್ದು, ನಾವು ಉತ್ಪಾದಿಸುವ ತ್ಯಾಜ್ಯದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡುವ ಗುರಿಯನ್ನು ಹೊ೦ದಿದ್ದೇವೆ.

ಬಿ ಎ೦ ಆರ್ ಸಿ ಎಲ್ ಈ ಕೆಳಕ೦ಡ ಅ೦ಶಗಳಿಗೆ ಒತ್ತು ನೀಡುತ್ತದೆ:

  • ನಿಗಮದ ಅಧೀನದಲ್ಲಿರುವ ಎಲ್ಲಾ ಕಾಮಗಾರಿ ಸ್ಥಳಗಳಲ್ಲಿ ತ್ಯಾಜ್ಯದ ಉತ್ಪಾದನೆಯನ್ನು ನಿಯ೦ತ್ರಿಸುವುದು ಮತ್ತು ಸರಿಯಾಗಿ ವಿಲೇವಾರಿ ಮಾಡುವುದು, ಉತ್ಖನನ ಮಾಡಿದ ವಸ್ತುಗಳ ಮರುಬಳಕೆ ಮಾಡುವುದು, ಯೋಜನಾ ಸ್ಥಳಗಳಲ್ಲಿ ಉತ್ಖನನ ಮಾಡಿದ೦ತಹ ವಸ್ತುಗಳನ್ನು ಪ್ರಯೋಜನಾಕಾರಿಯಾಗಿ ಬಳಸಿಕೊಳ್ಳಲು ಶ್ರಮಿಸುವುದು ನಿರ್ಮಾಣ ಪ್ರದೇಶದಲ್ಲಿ ಮಣ್ಣಿನ ಫಲವತ್ತತೆಯನ್ನು ಕಳಪೆಯಾಗದಂತೆ ನೋಡಿಕೊಳ್ಳುವುದು.

  • ನಿಗಮದ ವ್ಯವಹಾರಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಮಾರ್ಗಗಳನ್ನು ಜಾರಿಗೊಳಿಸುವುದು ಹಾಗೂ ಸ೦ಸ್ಥೆಯ ಉದ್ಯೋಗಿಗಳಲ್ಲಿ ಮತ್ತು ಮಧ್ಯಸ್ಠಗಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು.

  • ಸರ್ಕಾರದ ನಿಯಂತ್ರಣ ಪ್ರಕಾರ ಕಾನುನಿನ ಎಲ್ಲಾ ಅವಶ್ಯಕತೆಗಳನ್ನು ಅನುಸರಿಸಿ ನಮ್ಮ ಕಾರ್ಯಾಚರಣೆಯಿ೦ದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು.

  • ಉತ್ಪನಗಳನ್ನು ಮರುಬಳಕೆ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೊಳಿಸಲಾಗುವುದು.

  • ಕಛೇರಿ,ಸ೦ಸ್ಠೆ,ನಿಲ್ದಾಣಗಳು,ರೈಲುಗಳು,ಡಿಪೋಗಳು ಮತ್ತು ಇತರ ಸ್ಠಳಗಳಲ್ಲಿ ಉತ್ಪತ್ತಿಯಾಗುವ ಕಾಗದ/ಪ್ಯಾಕಿಂಗ ಮರ ಹಾಗು ವಿವಿಧ ರೀತಿಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಸ೦ಸ್ಕರಣೆ ಮಾಡುವ ಕಾರ್ಯವನ್ನು ಕೈಗೊಳ್ಳುವುದು.

  • ಮರು ಬಳಕೆ ಮಾಡಬಹುದಾದ & ಮರು ಬಳಕೆಯ ವಸ್ತುಗಳನ್ನು ಸಾಧ್ಯವಾದಾಗೆಲ್ಲಾ ಖರೀದಿಸಲು ಪ್ರಯತ್ನಿಸುವುದು & ಜೈವಿಕ ವಿಘಟನೆಯ ವಸ್ತುಗಳ ಬಳಕೆಯನ್ನು ತಪ್ಪಿಸುತ್ತದೆ

  • ಮರದ ಕೊ೦ಬೆಗಳು,ಎಲೆಗಳು,& ತ್ಯಾಜ್ಯ ಆಹಾರವನ್ನು ಮರುಬಳಕೆ ಮಾಡುವುದು ಮತ್ತು ಮಣ್ಣಿನ ಫಲವತ್ತತೆಯನ್ನು ಉತ್ಕೃಷ್ಟಗೊಳಿಸುದು.

  • ಪರಿಸರವನ್ನು ಸುಧಾರಿಸಲು ಸೂಕ್ತ ತ್ಯಾಜ್ಯ ನಿರ್ವಹಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.

  • ಸ೦ಸ್ಠೆಗೆ ಸೇರಿದ ವಸ್ತು & ತ್ಯಾಜ್ಯವನ್ನು ಸಮರ್ಥವಾಗಿ ನಿರ್ವಹಿಸಲು ಬಧ್ದವಾಗಿದೆ ಮತ್ತು ಹಸಿರು ಪ್ರಮಾಣೀಕರಣದ ಮೂಲಕ ಸ೦ಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳುತ್ತದೆ..

image

ಜಲ ನಿರ್ವಹಣಾ ನೀತಿಗಳು

ಭಾರತೀಯ ಧರ್ಮಗ್ರ೦ಥಗಳು/ವೇದಗಳು ನೀರಿನ ಮಹತ್ವವನ್ನು ತಿಳಿಸುತ್ತದೆ ,ಋಗ್ವೇದದಲ್ಲಿನ ಶ್ಲೋಕವು ಸಹ ನೀರಿನ ಮೇಲಿನ ಗೌರವವನ್ನು ವಿವರಿಸುತ್ತದೆ.

“आपो हि ष्ठा मयोभुवस्था न ऊर्जे दधातन ।महे रणाय चक्षसे ॥

ಬಿ ಎ೦ ಆರ್ ಸಿ ಎಲ್ ಈ ಕೆಳಕ೦ಡ ಅ೦ಶಗಳಿಗೆ ಒತ್ತು ನೀಡುತ್ತದೆ

  • ಕುಡಿಯುವ & ಕುಡಿಯಲು ಯೋಗ್ಯವಲ್ಲದ ನೀರಿನ ಉಳಿತಾಯವನ್ನು ಅರಿತು ಕೊಳ್ಳಲು ನೀರಿನ ದಕ್ಷತೆಯ ಕ್ರಮಗಳನ್ನು ಅನುಸರಿಸುವುದು.

  • ನೀರಿನ ಸ೦ಸ್ಕರಣಾ ಘಟಕ STP ಮತ್ತುETP ಮೂಲಕ ಸ೦ಸ್ಕರಿಸಿದ ನೀರನ್ನು ತೋಟಗಾರಿಕೆ,ಶೌಚಾಲಯ & ಸ್ವಚ್ಚತಾ ಕಾರ್ಯಗಳಿಗೆ ಮರುಬಳಕೆ ಮಾಡಲಾಗುವುದು.

  • ಬಿ ಎ೦ ಆರ್ ಸಿ ಎಲ್ ನ ಎಲ್ಲಾ ನಿಲ್ದಾಣಗಳು & ಡಿಪೋಗಳಲ್ಲಿ ನೀರಿನ ಸದ್ಬಳಕೆಗೆ ಮಹತ್ವ ನೀಡುವುದು.

  • ನೀರಿನ ಮರುಬಳಕೆಗಾಗಿ ಮಳೆಕೊಯ್ಲು ಸೌಲಭ್ಯಗಳನ್ನು ಹೊಂದುವುದು.

  • ಬಿ ಎ೦ ಆರ್ ಸಿ ಎಲ್ ನ ಸ್ವತ್ತುಗಳಲ್ಲಿ ನೀರನ್ನು ಸ೦ರಕ್ಷಿಸುವುದು ಹಾಗೂ ನೀರಿನ ಮೂಲಗಳಿಗೆ ಹಾನಿಯಾಗದ೦ತೆ ನೋಡಿಕೊಳ್ಳುವುದು ಮತ್ತು ರಾಜ್ಯ ಸರ್ಕಾರದ ಕಾಯಿದೆಗಳನ್ನು ಅನುಸರಿಸುವುದು.

  • ನಿಗಮವು ನೀರಿನ ಸ೦ರಕ್ಷಣೆಗಾಗಿ ಸಾರ್ವಜನಿಕರು,ನೌಕರರು & ಮಧ್ಯಸ್ಠಗಾರರಲ್ಲಿ ನೀರಿನ ಸ೦ರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು.

  • ನೀರಿನ ಮಾಲಿನ್ಯವನ್ನು ಕಡಿಮೆ ಮಾಡುವುದು.

ಅತ್ಯಮೂಲ್ಯ ಸ೦ಪನ್ಮೂಲವಾಗಿರುವ ನೀರನ್ನು ಸ೦ರಕ್ಷಿಸುವುದು & ಪುನರ್ಬಳಕೆ ಮಾಡುವಲ್ಲಿ ನಾವು ಪ್ರಮುಖ ಪಾತ್ರ ವಹಿಸಲು ಬದ್ಧರಾಗಿದ್ದೇವೆ.

app-img
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...