ಟಿಕೆೆೆಟ್ ಗಳು

ಸಾಮಾನ್ಯ ಮಾಹಿತಿ

ಟಿಕೆೆೆಟ್ ಗಳು
ನಮ್ಮ ಮೆಟ್ರೋದಲ್ಲಿ ಬಳಸಲಾಗುವ ಟಿಕೆಟ್ ಮಾಧ್ಯಮಗಳು ಪ್ರಮುಖವಾಗಿ ಸ್ಪರ್ಶರಹಿತ (ಕಾಂಟ್ಯಾಕ್ಟ ಲೆಸ್) ತಂತ್ರಜ್ಞಾನಹೊಂದಿದೆ. ಅವುಗಳೆಂದರೆ:
  • ಟೋಕನ್ ಗಳು (ಒಂದೇ ಪ್ರಯಾಣಕ್ಕಾಗಿ)

  • ಕಾಂಟ್ಯಾಕ್ಟ್ಲೆಸ್ ಸ್ಮಾರ್ಟ್‍ಕಾರ್ಡ್‍ಗಳು (ಬಹು ಪ್ರಯಾಣಗಳಿಗಾಗಿ)

  • QR ಕೋಡ್ ಆಧಾರಿತ ಟಿಕೆಟ್‌

ಟೊಕನ್ ಮತ್ತು ಸ್ಮಾರ್ಟ್ಕಾರ್ಡ್ ಒಳಗಿರುವ ಇಲೆಕ್ಟ್ರಾನಿಕ್ ಚಿಪ್ ನಲ್ಲಿ ಟಿಕೆಟಿನ ಮಾಹಿತಿ ಇರುತ್ತದೆ.

ಟೋಕನ್‍ಗಳು
  • ಟೋಕನ್‍ಗಳನ್ನು ಒಂದೇ ಪ್ರಯಾಣದ ಟಿಕೆಟುಗಳಾಗಿ ಬಳಸಲಾಗುತ್ತದೆ.

  • ಇವುಗಳನ್ನು ನಿರ್ಗಮಿಸುವಾಗ ದ್ವಾರಗಳಲ್ಲಿ ವಶಪಡಿಸಿಕೊಳ್ಳಲಾಗುತ್ತದೆ.

  • ಇವು ಸಾಂದರ್ಭಿಕ ಪ್ರಯಾಣಿಕರಿಗೆ ಸೂಕ್ತ.

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು
  • ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು 50.00 ರೂ.ಗಳಿಗೆ ದೊರಕುತ್ತವೆ.

  • ಪ್ರಯಾಣ ಮೌಲ್ಯವು ಕಾರ್ಡಿನ ದರದಿಂದ ಪ್ರತ್ಯೆಕವಾಗಿದೆ.

  • ಇವು ನಿಯಮಿತ ಪ್ರಯಾಣಿಕರಿಗೆ ಸೂಕ್ತವಾಗಿದೆ.

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳು

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳ ಪ್ರಯೋಜನಗಳು

ಒಮ್ಮೆ ಮಾತ್ರ ಖರೀದಿಸಿ ಮತ್ತು ನೀವು ಪ್ರಯಾಣಿಸುವ ಪ್ರತಿ ಸಲವು ಟಿಕೆಟನ್ನು ಖರೀದಿಸುವ ಅಗತ್ಯ ಇರುವುದಿಲ್ಲ.
ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಕಾರ್ಡ್ನಲ್ಲಿ ಮೌಲ್ಯವನ್ನು ತುಂಬಬಹುದು.
ನಿಲ್ದಾಣಗಳನ್ನು ಹೊರತುಪಡಿಸಿ ಮೌಲ್ಯ ವನ್ನು 24 x 7 ಟಾಪ್-ಅಪ್ ಮಾಡಲು ಅನೇಕ ಆಯ್ಕೆಗಳಿವೆ.


ಸ್ಮಾರ್ಟ್ ಕಾರ್ಡ್ ಗಳಿಗೆ ಟೋಕನ್ ದರದ ಮೇಲೆ 5% ರಿಯಾಯಿತಿ ಇದೆ.
app-img

ಸ್ಮಾರ್ಟ್‍ಕಾರ್ಡ್‍ಗಳಲ್ಲಿ ತುಂಬ ಬಹುದಾದಂಥ ಸ್ಟ್ಯಾಂಡರ್ಡ್ ಟಿಕೆಟ್ಗಳು: ಶೇಖರಿತ ಮೌಲ್ಯದ ಟಿಕೆೆಟ್ (ವಾರ್ಷಿಕ್)


ಸಂಚಾರ ಟಿಕೆಟ್ (ಸಂಚಾರ) :


  • ಬಹು ಪ್ರಯಾಣಗಳನ್ನು ಮಾಡಲು ಸ್ಮಾರ್ಟ್ ಕಾರ್ಡ್ಗಳನ್ನು ಬಳಸಲಾಗುತ್ತದೆ.

  • ಬಳಕೆದಾರರು ಸ್ಮಾರ್ಟ್ ಕಾರ್ಡ್ಗೆ ರೂ.50/- ರ ಗುಣಕಗಳಲ್ಲಿ ಗರಿಷ್ಠ ರೂ. 3000/- ವರೆಗಿನ ಮೊತ್ತವನ್ನು ತುಂಬ ಬಹುದು.

  • ಟಿಕೆೆಟ್ ನಲ್ಲಿ ಸಂಗ್ರಹವಾಗಿರುವ ಮೌಲ್ಯವನ್ನು ನಿರ್ವಹಿಸಿದ ಟ್ರಿಪ್ಗಳಿಗನುಗುಣವಾಗಿ ಕಡಿತಗೊಳಿಸಲಾಗುವುದು.

  • ಸ್ಮಾರ್ಟ್ ಕಾರ್ಡ್ ಗಳಿಗೆ ಟೋಕನ್ ದರ ಮೇಲೆ 5% ರಿಯಾಯಿತಿ ಇದೆ.

QR ಕೋಡ್ ಆಧಾರಿತ ಟಿಕೆಟ್‌

ನಮ್ಮ ಮೆಟ್ರೋ ಅಪ್ಲಿಕೇಶನ್ ಮತ್ತು ವಾಟ್ಸ್ಯಾಪ್ ತ್ವರಿತ ಸಂದೇಶಗಳ ಮೂಲಕ ಬೆಂಗಳೂರು ಮೆಟ್ರೋ ನಿಗಮ QR ಆಧಾರಿತ ಟಿಕೆಟ್‌ ಅನ್ನು ಪ್ರಾರಂಭಿಸಿದೆ. ವಾಟ್ಸ್ಯಾಪ್ ನಲ್ಲಿ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸುವಲ್ಲಿ ಜಾಗತಿಕ ಸಾರಿಗೆ ವ್ಯವಸ್ಥೆಯಲ್ಲಿ BMRCL ಮೊದಲ ಮೆಟ್ರೋ ಆಗಿದೆ.

ಈ ಸೌಲಭ್ಯದೊಂದಿಗೆ, ಪ್ರಯಾಣಿಕರು ತಮ್ಮ ಪ್ರಯಾಣದ ಟಿಕೆಟ್ ಅನ್ನು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಖರೀದಿಸಬಹುದು. ವಾಟ್ಸ್ಯಾಪ್ ನಲ್ಲಿನ ತ್ವರಿತ ಸಂದೇಶ ಸೇವೆಯು ಚಾಟ್‌ಬಾಟ್ (Chatbot) ಸೇವೆಯನ್ನು ಸಹ ಒಳಗೊಂಡಿರುತ್ತದೆ ಮತ್ತು ಪ್ರಯಾಣಿಕರು ವಾಟ್ಸ್ಯಾಪ್ ಸಂಖ್ಯೆ 81055-56677 ಮೂಲಕ ಈ ಚಾಟ್‌ಬಾಟ್ ಅನ್ನು ತಲುಪಬಹುದು. ಈ ಸೌಲಭ್ಯವು ಇಂಗ್ಲಿಷ್ ಮತ್ತು ಕನ್ನಡ ಎರಡೂ ಬಾಷೆಗಳಲ್ಲೂ ಲಭ್ಯವಿದೆ. ವಿವರಕ್ಕಾಗಿ ದಯವಿಟ್ಟು https://youtu.be/kIX15JE_RvM ವೀಕ್ಷಿಸಿ.

  • ಟಿಕೆಟ್‌ಗಳನ್ನು ಖರೀದಿಸುವುದು :   ಪ್ರಯಾಣಿಕರು ನಮ್ಮ ಮೆಟ್ರೋ ಆಪ್ ಅಥವಾ ವಾಟ್ಸಾಪ್ ಚಾಟ್‌ಬಾಟ್‌ನಲ್ಲಿ ತಮ್ಮ ಅಪೇಕ್ಷಿತ ಪ್ರವೇಶ ಮತ್ತು ನಿರ್ಗಮನ ನಿಲ್ದಾಣವನ್ನು ಆಯ್ಕೆ ಮಾಡಬಹುದು. ನಿಲ್ದಾಣಗಳನ್ನು ಆಯ್ಕೆ ಮಾಡಿದ ನಂತರ, ಪ್ರಯಾಣದ ದರವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಪ್ರಯಾಣಿಕರು ತಮಗೆ ಬೇಕಾದ ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಬಹುದು. ಯಶಸ್ವಿ ಪಾವತಿಯ ನಂತರ, ಪ್ರಯಾಣಿಕರು ಆಯ್ಕೆ ಮಾಡಿದಂತೆ ನಮ್ಮ ಮೆಟ್ರೋ ಅಪ್ಲಿಕೇಶನ್ ಅಥವಾ ವಾಟ್ಸಾಪ್ ನಲ್ಲಿ QR ಟಿಕೆಟ್ ರಚಿತವಾಗುತ್ತದೆ.

  • ಪ್ರವೇಶ ಮತ್ತು ನಿರ್ಗಮನ ಪಡೆಯುವಿಕೆ :   ರಚಿಸಲಾದ QR ಟಿಕೆಟ್ ಮೂಲಕ ನಿಲ್ದಾಣದ ಪ್ರವೇಶವನ್ನು ಮಾಡಲಾಗುತ್ತದೆ ಮತ್ತು ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಪ್ರಯಾಣಿಕರು ಅದೇ QR ಟಿಕೆಟ್ ಅನ್ನು AFC ಗೇಟ್‌ನಲ್ಲಿ QR ಟಿಕೆಟ್ ಓದಲು ಗೊತ್ತುಪಡಿಸಿದ ಸ್ಲಾಟ್‌ಗೆ ಪ್ರಸ್ತುತಪಡಿಸಿ ನಿರ್ಗಮಿಸಬಹುದು.

  • QR ಟಿಕೆಟ್‌ನ ಮಾನ್ಯತೆ :   ಒಂದು ಸಮಯದಲ್ಲಿ ಒಂದು QR ಟಿಕೆಟ್ ಅನ್ನು ಪಡೆಯಬಹುದು ಮತ್ತು ಇದು ಒಂದು ದಿನಕ್ಕೆ ಮಾನ್ಯವಾಗಿರುತ್ತದೆ. QR ಟಿಕೆಟ್ ಖರೀದಿಸಿದ ನಂತರ ಪ್ರಯಾಣಿಕರು ದಿನದ ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು.

  • ಮರುಪಾವತಿ :   ಪ್ರಯಾಣಿಕನು ಮರುಪಾವತಿಯನ್ನು ಬಯಸಿದರೆ, ಪ್ರವೇಶಿಸುವ ಮೊದಲು QR ಟಿಕೆಟ್ ಅನ್ನು ರದ್ದುಗೊಳಿಸಬಹುದು. ರದ್ದುಗೊಂಡ QR ಟಿಕೆಟ್‌ಗಾಗಿ, ಹಣವನ್ನು ಏಳು ದಿನಗಳಲ್ಲಿ ಮೂಲ ಖಾತೆಗೆ ಹಿಂತಿರುಗಿಸಲಾಗುತ್ತದೆ. ಪ್ರಯಾಣಿಕರು AFC ಗೇಟ್‌ ಪ್ರವೇಶಿಸಿದ ಸಂದರ್ಭದಲ್ಲಿ, ಯಾವುದೇ ಮರುಪಾವತಿ ಇರುವುದಿಲ್ಲ. QR ಟಿಕೆಟ್ ಅನ್ನು ಒಂದು ದಿನದೊಳಗೆ ರದ್ದುಗೊಳಿಸದಿದ್ದರೆ, ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ.

ಮೆಟ್ರೋ ʼಕ್ಯು ಆರ್‌ ಕೋಡ್‌ʼ ಟಿಕೆಟ್‌ ಪೇಟಿಎಮ್‌ ಮತ್ತು ಯಾತ್ರಾ ಅಪ್ಲಿಕೇಷನ್ ನಲ್ಲೂ ಕೂಡ ಲಭ್ಯ. ‌

ಗುಂಪು ಟಿಕೆಟ್:

ಇದು ಗುಂಪು ವ್ಯಕ್ತಿಗಳ ಪ್ರಯಾಣಕ್ಕಾಗಿ ಟಿಕೆೆಟ್ ಕೌಂಟರ್ನಲ್ಲಿ ನೀಡಲಾಗುವ ಕಾಗದದ ಟಿಕೆೆಟ್ ಆಗಿದೆ (ಗುಂಪನ್ನು ಎರಡು ನಿಲ್ದಾಣಗಳ ನಡುವಿನ ಒಂದೇ ಸಂಚಾರಕ್ಕಾಗಿ ಒಟ್ಟಾಗಿ ಪ್ರಯಾಣಿಸಲು ಉದ್ದೇಶಿಸಿರುವ ಕನಿಷ್ಠ 25 ಪ್ರಯಾಣಿಕರುಗಳನ್ನೊಳಗೊಂಡ ವ್ಯಕ್ತಿಗಳ ಒಂದು ತಂಡವೆಂದು ಪರಿಭಾಷಿಸಲಾಗಿದೆ) . ಗುಂಪಿನಲ್ಲಿರುವ ಪ್ರಯಾಣಿಕರಿಗೆ ಅವರನ್ನು ಹಸ್ತಚಾಲಿತ ತಪಾಸಣೆ ಮಾಡಿದ ನಂತರ ‘ತಿರುಗಣೆ ದ್ವಾರ’ದ (ಹಿಂಜ್ಡ್ ಗೇಟ್) ಮುಖಾಂತರ ಸಂದಾಯಿತ ಪ್ರದೇಶ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಗುಂಪು ಟಿಕೆಟ್ ಏಕ ಪ್ರಯಾಣ ಟಿಕೆೆಟ್ ಆಗಿದ್ದು, ಅದನ್ನು ನಿರ್ಗಮನ ನಿಲ್ದಾಣದ ಬಳಿ ಸಂಗ್ರಹಿಸಲಾಗುತ್ತದೆ. ಇದು ಟೋಕನ್ ದರದ ಮೇಲೆ ಶೇಕಡ10 ರಷ್ಟು ರಿಯಾಯಿತಿಯನ್ನು ಹೊಂದಿದೆ. * ಗಮನಿಸಿ: ಗ್ರೂಪ್ ಟಿಕೆೆಟ್ ಗೆ ಯಾವುದೇ ಮರುಪಾವತಿ ಇಲ್ಲ.

ದೊಡ್ಡ ಮತ್ತು ಮಧ್ಯಮ ಗುಂಪು ಪ್ರಯಾಣಿಕರಿಗೆ ರಿಯಾಯಿತಿ ಟಿಕೆಟ್ ಗಳು:


1ನೇ ಜನವರಿ 2023 ರಿಂದ ಮಧ್ಯಮ ಮತ್ತು ದೊಡ್ಡ ಗುಂಪುಗಳಿಗೆ, ಈ ಕೆಳಗಿನಂತೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

  • ಮಧ್ಯಮ ಗುಂಪು (ಗುಂಪಿನಲ್ಲಿ 100 ರಿಂದ 1000 ವ್ಯಕ್ತಿಗಳು)

    • ಟೋಕನ್ ದರದ ಮೇಲೆ ಶೇ 20ರಷ್ಟು ರಿಯಾಯಿತಿ. ಪ್ರಯಾಣಿಕರು ಒಟ್ಟಾಗಿ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ಒಂದೇ ಗಮ್ಯಸ್ಥಾನ ನಿಲ್ದಾಣದಿಂದ ಎಲ್ಲರೂ ಒಟ್ಟಾಗಿ ನಿರ್ಗಮಿಸಬೇಕು.

    • ಪ್ರಯಾಣಿಕರಿಗೆ ಫ್ಲಾಟ್ ದರ ರೂ.35/- ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಬಹುದು ಮತ್ತು ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬೇಕು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.

  • ದೊಡ್ಡ ಗುಂಪು (ಗುಂಪಿನಲ್ಲಿ 1000 ಕ್ಕಿಂತ ಹೆಚ್ಚು ವ್ಯಕ್ತಿಗಳು):

    • ಟೋಕನ್ ದರದ ಮೇಲೆ ಶೇ 20ರಷ್ಟು ರಿಯಾಯಿತಿ. ಪ್ರಯಾಣಿಕರು ಒಟ್ಟಾಗಿ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ಒಂದೇ ಗಮ್ಯಸ್ಥಾನ ನಿಲ್ದಾಣದಿಂದ ಎಲ್ಲರೂ ಒಟ್ಟಾಗಿ ನಿರ್ಗಮಿಸಬೇಕು.

    • ಪ್ರಯಾಣಿಕರಿಗೆ ಫ್ಲಾಟ್ ದರ ರೂ.30/- ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಬಹುದು ಮತ್ತು ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬೇಕು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.

ಮಧ್ಯಮ ಮತ್ತು ದೊಡ್ಡ ಗುಂಪಿನಲ್ಲಿ ಪ್ರಯಾಣಿಸಲು ಪ್ರಯಾಣದ ದಿನಾಂಕ, ಸಮಯ, ಪ್ರಯಾಣಿಕರ ಸಂಖ್ಯೆ, ಪ್ರವೇಶ ನಿಲ್ದಾಣ, ನಿರ್ಗಮನ ನಿಲ್ದಾಣ ಮತ್ತು ಪ್ರಯಾಣದ ಉದ್ದೇಶವನ್ನು ಸೂಚಿಸಿ ಪ್ರಯಾಣದ ದಿನಾಂಕದಿಂದ ಕನಿಷ್ಟ 7 ದಿನಗಳ ಮುಂಚಿತವಾಗಿ ನಿಗಮಕ್ಕೆ ಬರಹದ ಮೂಲಕ ವಿನಂತಿ ಸಲ್ಲಿಸಬೇಕು. ನಿಗಮವು ಪ್ರಯಾಣದ ವಿವರಗಳನ್ನು ಸೂಚಿಸುವ ಅಧಿಕಾರ ಪತ್ರ ಅಥವಾ ಗುಂಪು ಟಿಕೆಟ್ ಗಳನ್ನು ನೀಡುತ್ತದೆ. ನಿಗಮದ ಅಧಿಕೃತ ಅಧಿಕಾರಿ ಮೂಲಕ ಅಂತಹ ಪ್ರಯಾಣಿಕರ ಗುಂಪನ್ನು ಎಣಿಸುವ ಮತ್ತು ಹಸ್ತಚಾಲಿತ ವಿಧಾನಗಳ ಮೂಲಕ ನಿಲ್ದಾಣಗಳನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಮತಿಸಲಾಗುತ್ತದೆ.

ನಮ್ಮ ಮೆಟ್ರೋ ದಿನದ ಪಾಸುಗಳು

ದಿನದ ಪಾಸುಗಳನ್ನು ಬಳಿಸಿ ಕಡಿಮೆ ದರದಲ್ಲಿ ಮಿತಿಯಿಲ್ಲದೆ ಪ್ರಯಾಣಿಸಿ.
ಪಾಸುದರ(ರೂ.)ಮರುಪಾವತಿಸುವ ಕಾರ್ಡಿನ ದರ(ರೂ)ಮಾನ್ಯತೆ
1 ದಿನದ ಪಾಸು150 + 50501 - ದಿನ
3 ದಿನದ ಪಾಸು350 + 50503 - ದಿನ
5 ದಿನದ ಪಾಸು550 + 50505 - ದಿನ

* ನಿಮ್ಮ ಪ್ರಯಾಣದ ನಂತರ ಮಾನ್ಯತೆಯುಳ್ಳ ಪಾಸನ್ನು ಹಿಂದಿರುಗಿಸಿ ರೂ 50 ರ ಮರುಪಾವತಿಯನ್ನು ಯಾವುದೇ ಮೊಟ್ರೋದ ಗ್ರಾಹಕ ಸೇವಾ ಕೇಂದ್ರದಿಂದ ಪಡೆಯಿರಿ.

ಇತರೆ ಮಾಹಿತಿಗೆ ನಮ್ಮ ಸಹಾಯವಾಣಿ 1800-425-12345 ಅನ್ನು ಸಂಪರ್ಕಿಸಿ.

ಸ್ಮಾರ್ಟ್ ಕಾರ್ಡ್ ಗಳಿಗಾಗಿ ಟಾಪ್ ಅಪ್ ಔಟ್ ಲೆಟ್ ಗಳು

ಮೆಟ್ರೋ ನಿಲ್ದಾಣಗಳಲ್ಲಿ:
  • ವಾರ್ಷಿಕ್ ಟಿಕೆೆಟನ್ನು ಒಳಗೊಂಡಿರುವ ಸ್ಮಾರ್ಟ್ಕಾರ್ಡನ್ನು ಈಗಾಗಲೇ ಹೊಂದಿರುವ ಪ್ರಯಾಣಿಕರು ಸಂಗ್ರಹಿತ ಮೌಲ್ಯವನ್ನು ನಗದು, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯೂಪಿಐ ಮುಖಾಂತರ ಟಾಪ್ಅಪ್ ಮಾಡಿಸಿಕೊಳ್ಳುವ ಹಲವು ಆಯ್ಕೆಗಳಿವೆ.

ಮೆಟ್ರೋ ನಿಲ್ದಾಣಗಳನ್ನು ಹೊರುತುಪಡಿಸಿ ಬೇರೆ ಆಯ್ಕೆಗಳು:
  • ವಾರ್ಷಿಕ್ ಟಿಕೆೆಟನ್ನು ಒಳಗೊಂಡಿರುವ ಸ್ಮಾರ್ಟ್ಕಾರ್ಡನ್ನು ಈಗಾಗಲೇ ಹೊಂದಿರುವ ಪ್ರಯಾಣಿಕರು ಸಂಗ್ರಹಿತ ಮೌಲ್ಯವನ್ನು ಟಾಪ್ಅಪ್ ಮಾಡಿಸಿಕೊಳ್ಳುವುದಕ್ಕೆ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್, ಬಿ.ಎಂ.ಆರ್.ಸಿ.ಎಲ್ ವೆಬ್ಸೈಟ್, ಪೇಟಿಎಂ , ಅಮೇಜಾನ್ ಅಪ್ಲಿಕೇಶನ್ ಗಳನ್ನು ಬಳಸಬಹುದು.

about

ನಿಲ್ದಾಣಗಳಲ್ಲಿನ ಟಿಕೆೆಟ್ ಕೌಂಟರುಗಳು:

ನಗದು ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ.

ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...