ನಮ್ಮ ಮೆಟ್ರೋಗೆ ಸುಸ್ವಾಗತ

GST NO : 29AAACB4881D1ZQ

PAN NO :AAACB4881D

ನಮ್ಮ ಮೆಟ್ರೋಗೆ ಸುಸ್ವಾಗತ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿ.ಎ೦.ಆರ್.ಸಿ.ಎಲ್) ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಂದು ಜಂಟಿ ಉದ್ಯಮವಾಗಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಹೊಂದಿರುವ ಒಂದು ವಿಶೇಷ ಉದ್ದೇಶ ವಾಹಕವಾಗಿದೆ.

GST NO : 29AAACB4881D1ZQ

PAN NO : AAACB4881D

image Smart Card Top UpimageGet It On Google Play

ಮೆಟ್ರೋ ಬಗ್ಗೆ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿ.ಎ೦.ಆರ್.ಸಿ.ಎಲ್) ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಂದು ಜಂಟಿ ಉದ್ಯಮವಾಗಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಹೊಂದಿರುವ ಒಂದು ವಿಶೇಷ ಉದ್ದೇಶ ವಾಹಕವಾಗಿದೆ.

ಬೆಂಗಳೂರು ಮೆಟ್ರೋಗೆ “ನಮ್ಮ ಮೆಟ್ರೋ’’ ಎಂದು ನಾಮಕರಣ ಮಾಡಿದ್ದು, ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಇದರ ಜೊತೆಗೆ, ನಮ್ಮ ಮೆಟ್ರೋ ಇಂಗಾಲ ಹೊರಸೊಸುವಿಕೆಯ ತಗ್ಗುವಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವುದರಿಂದ ಇದು ಬೆಂಗಳೂರು ನಗರಕ್ಕೆ ಒಂದು ಮುಖ್ಯ ಪರಿಸರ ಸ್ನೇಹಿ ಸೇರ್ಪಡೆಯೆನಿಸಿದೆ.

ಮತ್ತಷ್ಟು ಓದಿ...

ಪರಿಹಾರರ್ಥಕ ಅರಣ್ಯೀಕರಣ

ಪ್ರಯಾಣ ಮಾರ್ಗದರ್ಶಿ

ಯೋಜನಾ ಚಿತ್ರಣ




ಬಿ.ಎ೦.ಆರ್.ಸಿ.ಎಲ್ (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ನಗರಕ್ಕೆ ಸೇವೆ ಸಲ್ಲಿಸುವ ಒಂದು ಮೆಟ್ರೋ ರೈಲು ವ್ಯವಸ್ಥೆಯಾಗಿದೆ. ಬಿಎಂಆರ್ ಸಿಎಲ್ ನ ಪ್ರಾಜೆಕ್ಟ್ ಪ್ರೊಫೈಲ್ ಹೀಗಿದೆ:

ಬಿ.ಎ೦.ಆರ್.ಸಿ.ಎಲ್ ಮೆಟ್ರೋ ವ್ಯವಸ್ಥೆಯು ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರಸ್ತುತ 0 ನಿಲ್ದಾಣಗಳೊಂದಿಗೆ 0 ಕಿ.ಮೀ ದೂರವನ್ನು ಕ್ರಮಿಸುವ ಎರಡು ಕಾರ್ಯಾಚರಣೆ ಮಾರ್ಗಗಳನ್ನು (ನೇರಳೆ ಮಾರ್ಗ ಮತ್ತು ಹಸಿರು ಮಾರ್ಗ) ಹೊಂದಿದೆ. ಬೆಂಗಳೂರಿನ ನಿವಾಸಿಗಳಿಗೆ ಸುರಕ್ಷಿತ, ವೇಗದ ಮತ್ತು ವಿಶ್ವಾಸಾರ್ಹ ಸಾರಿಗೆ ವಿಧಾನವನ್ನು ಒದಗಿಸಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

ಮೆಟ್ರೋ ಆಕರ್ಷಣೆಗಳು

ಗೋ ಗ್ರೀನ್ ಯೋಜನೆ

ಪರಿಸರದ ಉಸ್ತುವಾರಿ ಮತ್ತು ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವುದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ಮೂಲ ನೀತಿಯಾಗಿದೆ. ತನ್ನ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಅನಿವಾರ್ಯತೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಅಗತ್ಯವನ್ನು ಗುರುತಿಸಿ, BMRCL ಸಂಸ್ಥೆಯು 'Go Green' ವ್ಯವಸ್ಥೆ ಅಡಿಯಲ್ಲಿ ಕೆಳಕಂಡ ಪರಿಣಾಮಕಾರಿ ಕ್ರಮಗಳನ್ನು ಕ್ಯೆಗೊಂಡಿದೆ.


ಹಸಿರು ಶಕ್ತಿ (Green Energy) :ಸುಸ್ಥಿರ ಇಂಧನ ಪ್ರತಿಪಾದನ ನೀತಿಗೆ ತನ್ನ ಬದ್ಧತೆಯನ್ನು ತೋರಿಸುವ ನಿಟ್ಟಿನಲ್ಲಿ BMRCL ಸಂಸ್ಥೆಯು ಶುದ್ಧ ಮತ್ತು ಹಸಿರು ಶಕ್ತಿ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುಂಚೂಣಿಯಲ್ಲಿರುತ್ತದೆ. ಮೆಟ್ರೋ ಕಾರ್ಯಾಚರಣೆ ವ್ಯವಸ್ಥೆಯು ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಮುಂದುವರೆದು, BMRCL ಸಂಸ್ಥೆಯು ನಿಗದಿತ ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಸೌರ ಶಕ್ತಿಯನ್ನು ಪರವರ್ತಿಸಿ, ಕೆಲವು ಕಾರ್ಯಾಚರಣೆಗಳಿಗೆ ಅಗತ್ಯವಿರುವ ನವೀಕರಿಸಬಹುದಾದ ಶಕ್ತಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಪರಿಹಾರಾರ್ಥಕ ನೆಡುತೋಪು (Compensatory plantation) :ಬೆಂಗಳೂರು ಮೆಟ್ರೋ ಸಂಸ್ಥೆಯು ತನ್ನ ಪರಿಹಾರಾರ್ಥಕ ಅರಣ್ಯೀಕರಣ ಕಾರ್ಯಕ್ರಮದ ಭಾಗವಾಗಿ ಸುಮಾರು 1 ಲಕ್ಷ ಸಸಿಗಳನ್ನು ನೆಟ್ಟಿದ್ದು, ಮೂರು ವರ್ಷಗಳ ಕಾಲ ಅವುಗಳನ್ನು ನಿರ್ವಹಿಸಲು ಸಮರ್ಪಿತ ಬದ್ಧತೆಯೊಂದಿಗೆ, ಅವುಗಳ ಯಶಸ್ವಿ ಬೆಳವಣಿಗೆಯನ್ನು ಖಾತ್ರಿಪಡಿಸುತ್ತದೆ ಮತ್ತು ಬೆಂಗಳೂರಿನಲ್ಲಿ ಹಸಿರು ವಲಯ ವನ್ನು (lung space ) ಅಂದಾಜು 625 ಎಕರೆ ಪ್ರದೇಶದಲ್ಲಿಅಭಿವೃದ್ದಿ ಪಡಿಸಲಾಗಿದೆ. ಹೆಚ್ಚುವರಿಯಾಗಿ, ಮೆಟ್ರೋ ಯೋಜನೆಯು ಪರಿಸರ ಮೌಲ್ಯವನ್ನು ಕಾಪಾಡುತ್ತ 1,872 ಮರಗಳನ್ನು ಸ್ಥಳಾಂತರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದೆ, ಮತ್ತು ಪರಿಸರ ಸಂರಕ್ಷಣೆಯೊಂದಿಗೆ ಮೂಲಸೌಕರ್ಯ ಅಭಿವೃದ್ಧಿಯನ್ನು ಸಮತೋಲನಗೊಳಿಸುವ ತನ್ನ ಭದ್ದತೆಯ ಭಾಗವಾಗಿ 208 ಮರಗಳನ್ನು ಉಳಿಸಿಕೊಂಡಿದೆ,.

ಮಳೆನೀರು ಕೊಯ್ಲು(Rainwater Harvesting) :ಮುಂದುವರೆದು, BMRCL ಸಂಸ್ಥೆಯು ಸಮಗ್ರ ಮಳೆನೀರು ಕೊಯ್ಲು ಉಪಕ್ರಮಗಳ ಮೂಲಕ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿದೆ. BMRCL ಸಂಸ್ಥೆಯ ವಿವಿಧ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸುವ ಮೂಲಕ, ಅಮೂಲ್ಯವಾದ ಜಲಸಂಪನ್ಮೂಲಗಳನ್ನು ಸಂರಕ್ಷಿಸುವುದಲ್ಲದೆ, ಜಲಾನಯನ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸುವದರೊಂದಿಗೆ ಅಂತರ್ಜಲವನ್ನು ಮರುಪೂರಣಗೊಳಿಸಲು ಕ್ರಮ ಕ್ಯೆಗೊಳ್ಳಲಾಗಿರುತ್ತದೆ.

ತ್ಯಾಜ್ಯ ನಿರ್ವಹಣೆ (Waste Management) :ಶಕ್ತಿ ಮತ್ತು ನೀರಿನ ಸಂರಕ್ಷಣೆಯ ಪ್ರಯತ್ನಗಳ ಜೊತೆಯಲ್ಲಿ, BMRCL ಸಂಸ್ಥೆಯು ತನ್ನ ಎಲ್ಲಾ ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ದೃಢವಾದ ತ್ಯಾಜ್ಯ ನಿರ್ವಹಣೆ ಶಿಷ್ಟಾಚಾರಗಳನ್ನು ಜಾರಿಗೆ ತಂದಿದೆ. ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಮೆಟ್ರೋ ಎಲ್ಲಾ ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸುವ ಸಲುವಾಗಿ ತ್ಯಾಜ್ಯ ಸಂಗ್ರಹಣ ಬಿನ್ ಗಳನ್ನು ಅಳವಡಿಸಲಾಗಿದೆ.

bg-shape
  • atlassian
  • skype
  • gdrive
  • slack
  • jira
  • frame
shape

0

ನಿಲ್ದಾಣಗಳು

0 K+

ದಿನನಿತ್ಯದ ಪ್ರಯಾಣಿಕರು

0 M+

ವಾರ್ಷಿಕ ಪ್ರಯಾಣಿಕರು

0 Km

ಕಾರ್ಯಚರಣೆ ಮಾರ್ಗ

ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...